ಶಾರ್ದೂಲವಿಕ್ರೀಡಿತ ವೃತ್ತದಲ್ಲಿ ಪ್ರತಿಸಾಲಿನಲ್ಲೂ ೧೯ ಅಕ್ಷರಗಳಿರುತ್ತವೆ. ವಿನ್ಯಾಸದಲ್ಲಿ "ಮಸಜಸತತಗು" ಗಣಗಳಿರುತ್ತವೆ. (ಗು-ಗುರು) ಇದರ ಸೂತ್ರ ಪದ್ಯ ಹೀಗಿದೆ. "ಕಣ್ಗೊಪ್ಪಲ್ ಮಸಜಂಸತಂತಗಮುಮಾ ಶಾರ್ದೂಲ ವಿಕ್ರೀಡಿತಂ" ಇದರ ಪ್ರಸ್ತಾರ ವಿನ್ಯಾಸ ಹೀಗಿದೆ _ _ _ | _ | _ | _ |_ _ | _ _ | _ ಕಣ್ಗೊಪ್ಪಲ್| ಮಸಜಂ| ಸತಂತ |ಗಮುಮಾ| ಶಾರ್ದೂಲ| ವಿಕ್ರೀಡಿ|ತಂ ಸಂಸ್ಕೃತ ವಾಙ್ಮಯದಲ್ಲಿ ಇದು ಬಹುಸುಪ್ರಸಿದ್ಧವಾದ ಛಂದಸ್ಸು. ಕನ್ನಡದಲ್ಲೂ ಶಾರ್ದೂಲ ವಿಕ್ರೀಡಿತದ ಪದ್ಯಗಳು ವಿಫುಲವಾಗಿ ಸಿಗುತ್ತವೆ. ಉದಾಹರಣೆ:- ಮಾಯಾಕಾರ ಜಲೇಶ ಪೋಲಿಕೆಯುಮುಂಟೇಂ ನಿನ್ನ ವಿಸ್ತೀರ್ಣಕಂ ಕಾಯೈ ಸದ್ಗುಣವಾರ್ಧಿ! ಲೋಪರಹಿತ! ಪ್ರಾಪಂಚಿಕಾಂಬೋಧಿಯಂ| ಪಾಯಲ್ ದಾರಿಯ ಸೈನ್ಯವಿಷ್ಟು ಪಿಡಿಯಲ್ ನೀನಿತ್ತು ಮೇಣೆನ್ನುತುಂ ಜಾಯಾಪ್ರಾಪ್ತಿಗೆ ಸಾರ್ದರಾಮನುಲಿದಂ ಭೂಲೋಕಮಾನ್ಯಂಗೆ ತಾಂ||